ಸೌಥ್‌ಹ್ಯಾಮ್ಟನ್: ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ ಮತ್ತೊಂದು ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರುವ ತುಡಿತದಲ್ಲಿದೆ. ಹಾಗಾಗಿ, ಐಸಿಸಿ ವಿಶ್ವಕಪ್ ಟೂರ್ನಿಯ 28ನೇ ಪಂದ್ಯದಲ್ಲಿ ಗೆಲುವು ಕಾಣದ ಅಫ್ಘಾನಿಸ್ತಾನ ತಂಡದ ವಿರುದ್ಧ ನಾಳೆ ಇಲ್ಲಿನ ದಿ ರೋಸ್ ಬೌಲ್ ಅಂಗಳದಲ್ಲಿ ಸೆಣಸಲಿದೆ.
ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ವಿರುದ್ಧದ ಪಂದ್ಯಗಳಲ್ಲಿ ಭಾರತ ಮೂರು ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ತೋರುವ ಮೂಲಕ ಉತ್ತಮ ಆರಂಭ ನೀಡುವಲ್ಲಿ ಸಪಲರಾಗಿದ್ದಾರೆ.
ಜತೆಗೆ, ಬೌಲಿಂಗ್ ವಿಭಾಗ ಕೂಡ ಬ್ಯಾಟಿಂಗ್ ವಿಭಾಗದಂತೆ ಶಿಸ್ತುಬದ್ಧ ಬೌಲಿಂಗ್ ಮಾಡುವಲ್ಲಿ ಯಶ ಸಾಧಿಸಿದೆ. ಅದ್ಭುತ ಲಯದಲ್ಲಿ ಮುಂದುವರಿಯುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಎರಡು ಶತಕ ಹಾಗೂ ಅರ್ಧ ಶತಕ ಸಿಡಿಸಿದ್ದಾರೆ. ಜತೆಗೆ, ನಾಯಕ ವಿರಾಟ್ ಕೊಹ್ಲಿ ಕೂಡ ಉತ್ತಮ ಲಯದಲ್ಲಿರುವುದೂ ಕಂಡುಬಂದಿದೆ. ಅಲ್ಲದೇ, ಕನ್ನಡಿಗ ಕೆ.ಎಲ್ ರಾಹುಲ್ ಕೂಡ ತಂಡ ನೀಡಿರುವ ಜವಾಬ್ದಾರಿಯನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ.
ಹೆಬ್ಬೆರಳು ಗಾಯದಿಂದಾಗಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧೌನ್ ಅವರು ಟೂರ್ನಿಯಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಸ್ಥಾನ ಕಲ್ಪಿಸಲಾಗಿದೆ. ಭುವನೇಶ್ವರ್ ಕುಮಾರ್ ಸ್ನಾಯುಸೆಳೆತಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಎರಡು ಅಥವಾ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಶಿಖರ್ ಧವನ್ ಅವರ ಆರಂಭಿಕ ಸ್ಥಾನಕ್ಕೆ ಕೆ.ಎಲ್ ರಾಹುಲ್ ಫಿಕ್ಸ್ ಆಗಿದ್ದು, ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಭುವಿ ಅಲಭ್ಯತೆಯಿಂದ ಹಿರಿಯ ವೇಗಿ ಮೊಹಮ್ಮದ್ ಶಮಿ ಪ್ರಸಕ್ತ ಆವೃತ್ತಿಯ ವಿಶ್ವಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯವಾಡಲು ಉತ್ಸಾಹದಲ್ಲಿದ್ದಾರೆ.
ಈಗಾಗಲೇ ಐದು ಪಂಧ್ಯಗಳಲ್ಲಿ ಸೋಲು ಅನುಭವಿಸಿರುವ ಅಫ್ಘಾನಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಯಾವುದೇ ಮ್ಯಾಜಿಕ್ ಮಾಡಲಾಗಲಿಲ್ಲ. ಇದಕ್ಕೂ ಮೊದಲು ಏಷ್ಯಾ ಕಪ್ ಟೂರ್ನಿಯಲ್ಲೂ ನೆಲಕಚ್ಚಿತ್ತು. ಇನ್ನೂ ಒಂದರಲ್ಲೂ ಗೆಲುವು ಕಾಣದೆ ಹಿನ್ನಡೆ ಅನುಭವಿಸಿದೆ. ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಕೂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಇದು ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ.
ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ರಶೀದ್ ಖಾನ್ ಪ್ರಸಕ್ತ ಆವೃತ್ತಿಯಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 9 ಓವರ್‌ಗಳಲ್ಲಿ 110 ರನ್ ಚಚ್ಚಿಸಿಕೊಂಡಿದ್ದರು. ಇದರಿಂದಾಗಿ ಅವರ ಆತ್ಮವಿಶ್ವಾಸ ಕುಗ್ಗಿದೆ. ಆದರೆ, ತಂಡದ ಎಲ್ಲ ಆಟಗಾರರು ನಾಳಿನ ಪಂದ್ಯದಲ್ಲಿ ತಮ್ಮ ಸಾಮಾರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರುವುದು ಅನಿವಾರ್ಯವಾಗಿದೆ.
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್ ಧೋನಿ (ವಿ.ಕೀ), ರಿಷಬ್ ಪಂತ್, ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ರವೀಂದ್ರಾ ಜಡೇಜಾ.
ಗುಲ್ಬುದ್ದೀನ್ ನೈಬ್ (ನಾಯಕ), ನೂರ್ ಅಲಿ ಝರ್ಡಾನ್, ಹಜ್ರತುಲ್ಹಾ ಝಝೈ, ರಹಮತ್ ಶಾ (ವಿ.ಕೀ), ಅಸ್ಘರ್ ಅಫ್ಘನ್, ಹಸ್ಮತುಲ್ಹಾ ಶಾಹಿಡಿ, ನಾಜಿಬುಲ್ಹಾ ಝರ್ಡಾನ್, ಸಮಿಹುಲ್ಹಾ ಶಿನ್ವಾರಿ,ಮೊಹಮ್ಮದ್ ನಬಿ, ರಶೀದ್ ಖಾನ್, ದವ್ಲತ್ ಝರ್ಡಾನ್, ಅಫ್ತಾಬ್ ಅಲಾಮ್, ಹಮಿದ್ ಹಸನ್, ಮುಜೀಬ್ ಉರ್ ರಹಮನ್, ಇಕ್ರಾಮ್ ಅಲಿ ಖಿಲ್
ಸ್ಥಳ: ದಿ ರೋಸ್ ಬೌಲ್, ಸೌಥ್‌ಹ್ಯಾಮ್ಟನ್
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos